`ಲೋಕಲ್ ಟ್ರೈನ್` ಚಿತ್ರಕ್ಕೆ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ
Posted date: 01 Wed, Apr 2015 – 08:47:39 AM

 ಸಂಜನ ಸಿನಿ ಆರ್ಟ್ಸ್ ಲಾಂಛನದಲ್ಲಿ ಎಸ್.ಹೆಚ್.ವಾಲ್ಕೆ ಅವರು ನಿರ್ಮಿಸುತ್ತಿರುವ ‘ಲೋಕಲ್ ಟ್ರೈನ್ ಚಿತ್ರಕ್ಕೆ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಎಂಟು ದಿನಗಳ ಕಾಲ ನೆಲಮಂಗಲ ಬಳಿ ನಡೆದಿದೆ. ಮದರಂಗಿ ಕೃಷ್ಣ, ಮೀನಾಕ್ಷಿ, ಭಜರಂಗಿ ಲೋಕೇಶ್, ಚೇತನ್, ಪೆಟ್ರೋಲ್ ಪ್ರಸನ್ನ ಹಾಗೂ ಮೂವತ್ತಕ್ಕೂ ಹೆಚ್ಚು ಸಾಹಸ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಪಳನಿರಾಜ್ ಸಾಹಸ ನಿರ್ದೇಶನ ಮಾಡಿದ್ದಾರೆ.
     ಎನ್.ರುದ್ರಮುನಿ ‘ಲೋಕಲ್ ಟ್ರೈನ್ ಚಿತ್ರಕ್ಕೆ  ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.  ಜಯಂತ ಕಾಯ್ಕಿಣಿ, ವಿ.ನಾಗೇಂದ್ರಪ್ರಸಾದ್ ಬರೆದಿರುವ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಸಂಭಾಷಣೆಯನ್ನು ಕೇಶವಾದಿತ್ಯ ಬರೆದಿದ್ದಾರೆ. ರಮೇಶ್‌ಬಾಬು ಛಾಯಾಗ್ರಹಣ, ಪಿ.ಆರ್,ಸೌಂದರ್ ರಾಜ್ ಸಂಕಲನ, ರಾಮ್ ಶೆಟ್ಟಿ, ಪಳನಿರಾಜ್, ರಮೇಶ್ ಸಾಹಸ ನಿರ್ದೇಶನ, ಚಿನ್ನಿಪ್ರಕಾಶ್ ನೃತ್ಯ ನಿರ್ದೇಶನ ಹಾಗೂ ಈಶ್ವರಿ ಕುಮಾರ್ ಕಲಾ ನಿರ್ದೇಶನ ‘ಲೋಕಲ್ ಟ್ರೈನ್ ಚಿತ್ರಕ್ಕಿದೆ. ಮದರಂಗಿ ಕೃಷ್ಣ, ಮೀನಾಕ್ಷಿ ದೀಕ್ಷಿತ್, ಎಸ್ಟರ್ ನರೋನ, ಲೋಕೇಶ್(ಭಜರಂಗಿ), ಸುಚೀಂದ್ರಪ್ರಸಾದ್, ರೇಖಾ ಕುಮಾರ್, ಸಂದೀಪ, ಚಂದ್ರಶೇಖರ್, ಸುಮಿತ್ರ, ಪೆಟ್ರೊಲ್ ಪ್ರಸನ್ನ, ಚೇತನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed